ಬೆಂಗಳೂರು: ದಿನ ನಿತ್ಯದ ಜೀವನದಲ್ಲಿ ಒಂದಲ್ಲಾ ಒಂದು ಗಾಯಗಳು, ನೋವುಗಳು ಸಾಮಾನ್ಯ. ಗಾಯವಾದ ತಕ್ಷಣ ಮುಲಾಮು ಹಚ್ಚುವುದು ಸಾಮಾನ್ಯ. ಮುಲಾಮಿನ ಸಹಾಯವಿಲ್ಲದೆ ಗಾಯ ಗುಣಪಡಿಸುವಂತಹ ಮನೆ ಔಷಧಗಳು ಯಾವುದೆಲ್ಲಾ ನೋಡೋಣ.ಅಲ್ಯುವೀರಾ ನಮ್ಮ ಮನೆಗಳಲ್ಲಿ ಸಾಮಾನ್ಯವಾಗಿ ಇದ್ದೇ ಇರುತ್ತದೆ. ಇದನ್ನು ಮುಖದ ಮೊಡವೆಗಾಗಿ ಹಚ್ಚುವುದು ನಮಗೆಲ್ಲಾ ಗೊತ್ತು. ಈ ಅಲ್ಯುವಿರಾವನ್ನು ನೋವು ನಿವಾರಕವಾಗಿಯೂ ಬಳಸಬಹುದು.ಅಲ್ಯುವಿರಾದ ಎಲೆಯನ್ನು ತೆಳುವಾಗಿ ಕತ್ತರಿಸಿ, ಅದರ ಅಂಟನ್ನು ನೋವಿರುವ ಜಾಗಕ್ಕೆ ಕಟ್ಟಿಕೊಂಡರೆ ನೋವು ಬೇಗ ನಿವಾರಣೆಯಾಗುತ್ತದೆ. ಅಲ್ಯುವಿರಾದ