ನೆಗಡಿ, ಕೆಮ್ಮು, ಅಜೀರ್ಣದಂತಹ ಸಣ್ಣ-ಪುಟ್ಟ ಸಮಸ್ಯೆಗಳಿಗೆ ವೈದ್ಯರ ಬಳಿ ಓಡುತ್ತಿದ್ದ ಜನರು ಈಗ ಮನೆಮದ್ದುಗಳ ಬಗ್ಗೆ ಒಲವು ತೋರುತ್ತಿದ್ದಾರೆ ಅಂದರೆ ನಮ್ಮ ಪೂರ್ವಜರು ಅನುಸರಿಸುತ್ತಿದ್ದ ಮಾರ್ಗಗಳತ್ತಲೇ ವಾಲುತ್ತಿದ್ದಾರೆ. ಇಂತಹ ಮನೆಮದ್ದುಗಳ ಔಷಧಿಗಳ ಪಟ್ಟಿಯಲ್ಲಿ ಬೆಳ್ಳುಳ್ಳಿಯೂ ಒಂದು. ವೈದ್ಯಕೀಯ ಶಾಸ್ತ್ರದಲ್ಲಿ ಬೆಳ್ಳುಳ್ಳಿಗೆ ಪ್ರಮುಖವಾದ ಸ್ಥಾನವಿದೆ. ಇದರಿಂದ ಬಹಳ ಆರೋಗ್ಯ ಪ್ರಯೋಜನಗಳಿವೆ. ಬೆಳ್ಳುಳ್ಳಿಯ ಸಣ್ಣ ಸಣ್ಣ ಎಸಳುಗಳೂ ಸಹ ಔಷಧೀಯ ಗುಣಗಳನ್ನು ಹೊಂದಿದೆ. ಇದನ್ನು ಹಲವಾರು ವರ್ಷಗಳಿಂದ ಅನೇಕ ಚಿಕಿತ್ಸೆಗಳಲ್ಲಿಯೂ ಬಳಸಲಾಗುತ್ತಿದೆ.