ಬೆಂಗಳೂರು: ಮಲಬದ್ಧತೆ ಎನ್ನುವುದು ಯಾರಲ್ಲೂ ಹೇಳಿಕೊಳ್ಳಲಾಗದ ಕಿತ್ತು ತಿನ್ನುವ ಸಮಸ್ಯೆ. ಇದಕ್ಕೆ ನಮ್ಮ ಆಹಾರದಲ್ಲೇ ಕೆಲವು ಬದಲಾವಣೆ ತಂದುಕೊಂಡರೆ, ಆರೋಗ್ಯ ಕಾಪಾಡಿಕೊಳ್ಳಬಹುದು. ಶುಂಠಿ ಮತ್ತು ಪುದೀನಾ ನಮ್ಮ ಮನೆಯಲ್ಲಿ ಸದಾ ಇರುತ್ತದಲ್ವಾ? ಇದುವೇ ಮಲಬದ್ಧತೆಗೆ ಪರಿಹಾರ ಕೊಡುತ್ತದೆ. ದಿನಾ ಸೇವಿಸುವ ಚಹಾಕ್ಕೆ ಶುಂಠಿ ಅಥವಾ ಪುದೀನಾ ಎಲೆ ಹಾಕಿ ಸೇವಿಸಿದರೆ, ಅದು ನಮ್ಮ ಜೀರ್ಣ ಕ್ರಿಯೆಯನ್ನು ಸುಗಮಗೊಳಿಸುತ್ತದೆ. ಇದರಿಂದ ಬಹಿರ್ದೆಸೆಗೆ ಕೂರುವಾಗ ತಿಣುಕಾಡಬೇಕಿಲ್ಲ.ನಿಂಬೆ ಹಣ್ಣು ಕೂಡಾ ಮಲಬದ್ಧತೆಗೆ ಪರಿಹಾರ