ಬೆಂಗಳೂರು: ಹಲ್ಲು ಹಳದಿಗಟ್ಟಿದೆಯೇ? ಬಾಯ್ತುಂಬಾ ನಗಲೂ ನಾಚಿಕೆಯಾಗುತ್ತಿದೆಯೇ? ಹಾಗಿದ್ದರೆ ಕೆಲವು ಸಿಂಪಲ್ ಮನೆ ಮದ್ದು ಮಾಡಿ ನೋಡಬಹುದು. ಬೇಕಿಂಗ್ ಸೋಡಾ ಹಲ್ಲುಜ್ಜಲು ಬಳಸುವ ಪೇಸ್ಟ್ ಜತೆಗೆ ಸ್ವಲ್ಪ ಬೇಕಿಂಗ್ ಸೋಡಾ ಮಿಕ್ಸ್ ಮಾಡಿ ಹಲ್ಲುಜ್ಜಿ ನೋಡಿ. ಈ ರೀತಿ ವಾರಕ್ಕೆ ಎರಡು ಬಾರಿ ಮಾಡುವುದರಿಂದ ಹಲ್ಲು ಹಳದಿಗಟ್ಟುವಿಕೆ ತಡೆಯಬಹುದು.ಕಿತ್ತಳೆ ಸಿಪ್ಪೆ ಮೊಡವೆ, ತ್ವಚೆ ಸಂರಕ್ಷಣೆಗೆ ಕಿತ್ತಳೆ ಸಿಪ್ಪೆ ಉಪಯೋಗ ಕೇಳಿದ್ದೇವೆ. ಅದೇ ರೀತಿ ಹಲ್ಲು ಹಳದಿಗಟ್ಟುವಿಕೆಗೂ ಇದನ್ನು ಬಳಸಬಹುದು.