ಜೇನಿಗೆ ಸಂಸ್ಕ್ರತದಲ್ಲಿ ಮಧು ಎಂದು ಕರೆಯುತ್ತಾರೆ. ಪ್ರಕೃತಿಯ ಕೊಡುಗೆಯಾಗಿರುವ ಇದು ಹಲವಾರು ರೋಗಗಳಿಗೆ ಒಳ್ಳೆಯ ಔಷಧಿಯಾಗಿದೆ. ಆಯುರ್ವೇದದ ಔಷಧಗಳಲ್ಲಿ ಜೇನನ್ನು ಹೆಚ್ಚಾಗಿ ಬಳಸುತ್ತಾರೆ. ಅಧಿಕ ಪೌಷ್ಠಿಕಾಂಶಗಳನ್ನು ಹಾಗೂ ಅಧಿಕ ಔಷಧೀಯ ಗುಣವನ್ನು ಹೊಂದಿರುವ ಜೇನನ್ನು ನೀವು ಇದುವರೆಗೆ ಬಳಸುತ್ತಿಲ್ಲವಾದಲ್ಲಿ ಇನ್ನಾದರೂ ಬಳಸಿ. ಅಧಿಕ ಸಿಹಿಯಾಗಿರುವ ಇದನ್ನು ದೈನಂದಿನ ಆಹಾರ ಕ್ರಮದಲ್ಲಿ ಬಳಸುವುದು ಬಹಳ ಸುಲಭವಾಗಿದೆ. ಹೆಜ್ಜೇನು, ಕೋಲು ಜೇನು, ತುಡುವೆ ಜೇನು ಎಂದು ಜೇನಿನಲ್ಲಿ ಹಲವಾರು ವಿಧಗಳಿವೆ. ಜೇನು