ಬೆಂಗಳೂರು : ಕೆಲವೊಮ್ಮೆ ಗ್ಯಾಸ್ಟ್ರಿಕ್, ಆಸಿಡಿಟಿ ಸಮಸ್ಯೆಯಾದಾಗ ಹೊಟ್ಟೆನೋವು ಬರುತ್ತದೆ. ಇದಕ್ಕೆ ಬಿಸಿನೀರು ಅತ್ಯಂತ ಉತ್ತಮ ಪರಿಹಾರವಾಗಿದೆ. ಹೌದು ಬಿಸಿ ನೀರು ಕೂಡ ಕೆಲವೊಂದು ಕಾಯಿಲೆಗಳಿಗೆ ಒಳ್ಳೆಯ ಮನೆ ಮದ್ದು. ಒಂದು ಪಾತ್ರೆ ಅಥವಾ ಬಾಟೆಲ್ ನಲ್ಲಿ ಬಿಸಿನೀರನ್ನು ತುಂಬಿಸಬೇಕು. ನಂತರ ಹೊಟ್ಟೆಯ ಮೇಲೆ 15ನಿಮಿಷ ಇಟ್ಟುಕೊಳ್ಳಬೇಕು. ಈ ರೀತಿ ಮಾಡುವುದರಿಂದ ಸ್ನಾಯುಗಳು ಸಡಿಲಗೊಳ್ಳುತ್ತವೆ. ಆಹಾರ ಜೀರ್ಣವಾಗದಿದ್ದರೆ ಬಿಸಿ ಬಿಸಿ ನೀರು ಮಿತವಾಗಿ ಕುಡಿಯುವುದರಿಂದ ಕೂಡ ಪರಿಹಾರ ಸಿಗುತ್ತದೆ.