ಮದ್ಯದ ಅಮಲಿನಲ್ಲಿ ರೋಮ್ಯಾನ್ಸ್ ಮಾಡಿದ್ರೆ ಹೀಗಾಗೋದಾ?

love hate story
ಬೆಂಗಳೂರು| Jagadeesh| Last Modified ಗುರುವಾರ, 14 ನವೆಂಬರ್ 2019 (14:03 IST)
ಕೆಲವರು ಸಂತೋಷ ಅನುಭವಿಸಲು ಕುಡಿಯುತ್ತಾರೆ. ಕುಡಿದು ಸಂತೋಷ ಅನುಭವಿವಾಗಲೂ ಲೈಂಗಿಕ ಕ್ರಿಯೆ ವೇಳೆ ಕೆಲವೊಂದು ಎಡವಟ್ಟುಗಳು ಆಗುತ್ತವೆ.

ಯಾವುದೇ ಸಂಬಂಧ ಮತ್ತು ಭಯವಿಲ್ಲದೆ ಒಂದು ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಂಡು ಸಂತೋಷ ಪಡುವುದರಲ್ಲಿ ಮಹಿಳೆಯರೂ ಸಹ ಪುರುಷರಿಗಿಂತ ಕಡಿಮೆಯಿಲ್ಲ ಎಂದು ಮನೋವಿಜ್ಞಾನಿಗಳು ತಿಳಿಸುತ್ತಾರೆ.

ಅಂದರೆ ಬಾರಿನಲ್ಲಿ ಒಬ್ಬನನ್ನು ಪರಿಚಯ ಮಾಡಿಕೊಂಡು ಆತನ ಜೊತೆಗೆ ಒಂದು ರಾತ್ರಿ ಕಳೆದು ಬರುವುದು ರೋಚಕ ಅನುಭವವಾಗಿರುತ್ತದೆ. ಆದರೆ ಮಹಿಳೆಯರು ಭಾವನಾತ್ಮಕ ವಿಚಾರಗಳಿಗೆ ಹೆಚ್ಚಿನ ಬೆಲೆ ನೀಡುತ್ತಾರೆ.

ರತಿಕ್ರಿಯೆ ಸಮಯದಲ್ಲಿ ಸುರಕ್ಷತೆಯು ಅದೂ ರಾತ್ರಿಯ ವೇಳೆಯಲ್ಲಿ ತುಂಬಾ ಮುಖ್ಯವಾಗಿರುತ್ತದೆ. ಸಿಕ್ಕ ಸಿಕ್ಕವರ ಜೊತೆಗೆ ಹೋಗಬೇಡಿ, ಸಿಕ್ಕವರನ್ನು ಆಯ್ಕೆ ಮಾಡಿಕೊಳ್ಳಬೇಡಿ. ಒಂದು ವೇಳೆ ಒಬ್ಬನ ಜೊತೆಗೆ ಹೋಗಬೇಕು ಎಂದು ನಿಮಗೆ ಅನಿಸಿದರೂ ಆತ ಹೇಳಿದ ಸ್ಥಳಕ್ಕೆ ಹೋಗುವ ಬದಲಿಗೆ ನಿಮಗೆ ತಿಳಿದಿರುವ ಸ್ಥಳಕ್ಕೆ ಆತನನ್ನು ಕರೆದುಕೊಂಡು ಹೋಗಿ. ಇದರಿಂದ ನಿಮ್ಮ ಸುರಕ್ಷತೆಯ ಖಾತ್ರಿ ನಿಮಗೆ ಇರುತ್ತದೆ.  

ಅಪರಿಚಿತನ ಜೊತೆಗೆ ಸಂಭೋಗ ಮಾಡುವಾಗ ಸುರಕ್ಷಿತ ಲೈಂಗಿಕ ವಿಧಾನಗಳನ್ನು ಬಳಸಿ. ಬೇಡದ ಗರ್ಭ ಧರಿಸುವ ಸಾಧ್ಯತೆಯನ್ನು ಮಹಿಳೆ ತಡೆಯಬೇಕು.

ಹೆಚ್ಚು ಕುಡಿದು ಸಂತೋಷವನ್ನು ಅನುಭವಿಸಲು ಇದು ಸಮಯವಲ್ಲ. ಏಕೆಂದರೆ ಹೆಚ್ಚಾಗಿ ಕುಡಿದರೆ, ಕುಡಿದ ಮತ್ತಿನಲ್ಲಿ ಕಾಂಡೋಮ್ ಬಳಸುವುದನ್ನು ಮರೆಯಬಹುದು. ಹಾಗಾಗಿ ಇತಿ ಮಿತಿ ಅರಿತು ಕುಡಿಯಿರಿ.ಇದರಲ್ಲಿ ಇನ್ನಷ್ಟು ಓದಿ :