ಚರ್ಮದ ಮೇಲೆ ನರಹುಲಿ ಅಥವಾ ಸಣ್ಣಗಂತಿಗಳು ಪ್ರತಿಯೊಬ್ಬರಲ್ಲೂ ಕಾಣಿಸಿಕೊಳ್ಳುತ್ತದೆ. ಇಂಗ್ಲೀಷ್ನಲ್ಲಿ ವಾರ್ಟ್ಸ್ (Warts) ಎನ್ನುತ್ತಾರೆ. ಹ್ಯೂಮನ್ ಪಾಪಿಲೋಮ ಎನ್ನುವ ವೈರಸ್ನಿಂದ ಈ ಸಣ್ಣಗಂತಿಗಳು ಉಂಟಾಗುತ್ತವೆ. ಇವುಗಳು ಹೆಚ್ಚಾಗಿ ಮುಖ, ಕುತ್ತಿಗೆಯ ಭಾಗ, ಕೈಗಳು, ಪಾದಗಳ ಮೇಲೆ ಕಾಣಿಸಿಕೊಳ್ಳುತ್ತವೆ. ಚರ್ಮಕ್ಕೆ ಅಂಟಿಕೊಂಡಿರುವ ಕೆಲವು ಸಣ್ಣಗಂತಿಗಳು ಅಷ್ಟಾಗಿ ನೋವಾಗುವುದಿಲ್ಲ. ಆದರೆ, ಕೆಲವು ತುರಿಕೆ ಉಂಟುಮಾಡುತ್ತದೆ.