ಚಳಿಗಾಲದಲ್ಲಿ ಕ್ಯಾರೆಟ್ ಸೇವನೆ ಎಷ್ಟು ಮುಖ್ಯ?

ಬೆಂಗಳೂರು| Ramya kosira| Last Modified ಬುಧವಾರ, 15 ಡಿಸೆಂಬರ್ 2021 (10:26 IST)
ನೆಲದಡಿಯಲ್ಲಿ ಬೆಳೆಯುವ ಕ್ಯಾರೆಟ್ ತಿನ್ನುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ತಜ್ಞರು ಯಾವಾಗಲೂ ಸಲಹೆ ನೀಡುತ್ತಾರೆ.

ಇದು ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು. ಅದರಲ್ಲೂ ಚಳಿಗಾಲದಲ್ಲಿ ಸಿಗುವ ಕ್ಯಾರೆಟ್ ತಿನ್ನಲು ಎಲ್ಲರೂ ಇಷ್ಟಪಡುತ್ತಾರೆ. ಇದು ಅನೇಕ ಪೋಷಕಾಂಶಗಳಿಂದ ತುಂಬಿದೆ. ಕ್ಯಾರೆಟ್ನಿಂದ ಹಲ್ವಾ, ಕ್ಯಾರೆಟ್ ಸೂಪ್, ಕ್ಯಾರೆಟ್ ಬರ್ಫಿ, ಕ್ಯಾರೆಟ್ ಚಟ್ನಿ, ಕ್ಯಾರೆಟ್ ಕೇಕ್ ಮುಂತಾದ ಭಕ್ಷ್ಯಗಳನ್ನು ಕೂಡ ಮಾಡಬಹುದು.
ಕ್ಯಾನ್ಸರ್

ಕ್ಯಾರೆಟ್‌ನಲ್ಲಿ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ. ಅನಾರೋಗ್ಯದ ವಿರುದ್ಧ ಹೋರಾಡಲು ಮತ್ತು ದೇಹದ ಸಾಮರ್ಥ್ಯವನ್ನು ಹೆಚ್ಚಿಸಲು ಕ್ಯಾರೆಟ್ ಸಹಾಯಕ. ಕ್ಯಾರೆಟ್‌ನಲ್ಲಿರುವ ಆಂಟಿಆಕ್ಸಿಡೆಂಟ್ ಕ್ಯಾರೊಟಿನಾಯ್ಡ್‌ಗಳು ಮತ್ತು ಆಂಥೋಸಯಾನಿನ್‌ಗಳು ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ.
ಹೃದಯ

ಕ್ಯಾರೆಟ್ ನಿಮ್ಮ ಹೃದಯಕ್ಕೆ ಉತ್ತಮ. ಹೃದ್ರೋಗ ಇರುವವರು ಕ್ಯಾರೆಟ್ ತಿನ್ನಬೇಕು. ಇವುಗಳಲ್ಲಿರುವ ಆ್ಯಂಟಿಆಕ್ಸಿಡೆಂಟ್‌ಗಳು ಹೃದಯಕ್ಕೆ ವಿಶೇಷ ರಕ್ಷಣೆ ನೀಡುತ್ತದೆ. ಇವುಗಳಲ್ಲದೆ ಕ್ಯಾರೆಟ್‌ನಲ್ಲಿ ಪೊಟ್ಯಾಸಿಯಮ್ ಮತ್ತು ಫೈಬರ್ ಕೂಡ ಇದೆ. ಜೊತೆಗೆ ಕೆಂಪು ಕ್ಯಾರೆಟ್ ಲೈಕೋಪೀನ್ ಅನ್ನು ಹೊಂದಿರುತ್ತದೆ. ಇದು ಹೃದ್ರೋಗ ತಡೆಯಲು ಸಹಾಯ ಮಾಡುತ್ತದೆ.
ಮಲಬದ್ಧತೆ

ನಿಮಗೆ ಮಲಬದ್ಧತೆ ಸಮಸ್ಯೆ ಇದ್ದರೆ ಹಸಿ ಕ್ಯಾರೆಟ್ ತಿನ್ನಲು ತಜ್ಞರು ಸಲಹೆ ನೀಡುತ್ತಾರೆ. ಈ ಸಮಸ್ಯೆಯಿರುವ ರೋಗಿಗಳು ಯಾವಾಗಲೂ ಹಸಿ ಕ್ಯಾರೆಟ್ ತಿನ್ನಬೇಕು. ಇದರಲ್ಲಿ ನಾರಿನಂಶ ಹೆಚ್ಚಿದ್ದು, ಮಲಬದ್ಧತೆಯನ್ನು ಸಂಪೂರ್ಣವಾಗಿ ತಡೆಯಲು ಇದು ಸಹಾಯ ಮಾಡುತ್ತದೆ.
ಮಧುಮೇಹ

ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಕ್ಯಾರೆಟ್ ಬಹಳಷ್ಟು ಸಹಾಯ ಮಾಡುತ್ತದೆ. ಮಧುಮೇಹ ಇರುವವರು ಕ್ಯಾರೆಟ್ ಅನ್ನು ತಿನ್ನಬೇಕು. ಕ್ಯಾರೆಟ್‌ನಲ್ಲಿರುವ ಫೈಬರ್ ಆರೋಗ್ಯಕರ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.


ಇದರಲ್ಲಿ ಇನ್ನಷ್ಟು ಓದಿ :