ವಾರಕ್ಕೆ ಎಷ್ಟು ಬಾರಿ ಆತ್ಮರತಿ ಮಾಡಿಕೊಳ್ಳಬಹುದು?

ಬೆಂಗಳೂರು| Krishnaveni K| Last Modified ಶನಿವಾರ, 17 ಆಗಸ್ಟ್ 2019 (10:01 IST)
ಬೆಂಗಳೂರು: ವಿವಾಹ ಪೂರ್ವದಲ್ಲಿ ಲೈಂಗಿಕ ಕಾಮನೆ ತಣಿಸಿಕೊಳ್ಳಲು ಉತ್ತಮ ದಾರಿಯೆಂದರೆ ಆತ್ಮರತಿ. ಆದರೆ ವಾರಕ್ಕೆ ಎರಡು ಅಥವಾ ಮೂರು ಬಾರಿ ಆತ್ಮರತಿ ಮಾಡುವುದರಿಂದ ತೊಂದರೆಯಾಗುತ್ತದೆಯೇ?
 

ಮುಂದೆ ವಿವಾಹವಾದ ಬಳಿಕ ಸಂಗಾತಿ ಜತೆ ಲೈಂಗಿಕ ಕ್ರಿಯೆ ನಡೆಸಲು ಸಮಸ್ಯೆಯಾಗುತ್ತದೆಯೇ ಎಂಬ ಪ್ರಶ್ನೆ ಕೆಲವರಿಗೆ ಕಾಡುತ್ತದೆ. ಅತಿಯಾದರೆ ಅಮೃತವೂ ವಿಷ ಅಂತಾರಲ್ಲ. ಹಾಗೆ ಅತಿಯಾಗಿ ಆತ್ಮರತಿ ಮಾಡಿ ಅದು ಚಟವಾದರೆ ಅದಕ್ಕೆ ತಕ್ಕ ಚಿಕಿತ್ಸೆ ಪಡೆದುಕೊಳ್ಳಬೇಕಾಗುತ್ತದೆ.
 
ವಾರಕ್ಕೆ ಎರಡು ಅಥವಾ ಮೂರು ಬಾರಿ ಆತ್ಮರತಿ ಮಾಡಿದರೆ ತಪ್ಪೇನಿಲ್ಲ. ಇದರಿಂದ ದಾಂಪತ್ಯ ಜೀವನಕ್ಕೆ ತೊಂದರೆಯಾಗದು. ಅದೇ ಯೋಚನೆಯಲ್ಲಿ ಕೊರಗುತ್ತಾ ಕೂರಬಾರದು ಅಷ್ಟೇ.
ಇದರಲ್ಲಿ ಇನ್ನಷ್ಟು ಓದಿ :