ದಾಸವಾಳ ಸಾಮಾನ್ಯವಾಗಿ ಮನೆಯ ಮುಂದೆಯೋ ಇಲ್ಲ ದೇವಸ್ಥಾನದ ಬೀದಿಯಲ್ಲೋ ಕಂಡುಬರುವ ಹೂ ಇದನ್ನು ಪೂಜೆಗಳಲ್ಲಿ ಹೆಚ್ಚಾಗಿ ಬಳಸುತ್ತಾರೆ. ಇದರಲ್ಲಿ ಹಲವು ಬಗೆಯ ಹೂಗಳಿದ್ದು ಅದರಲ್ಲಿ ಬಿಳಿ ದಾಸವಾಳ ಹಾಗು ಕೆಂಪು ದಾಸವಾಳ ಹೆಚ್ಚಾಗಿ ಕಂಡುಬರುತ್ತದೆ. ಭಾರತೀಯ ಆಯುರ್ವೇದದಲ್ಲಿ ದಾಸವಾಳವು ಔಷಧೀಯ ಗುಣಗಳನ್ನು ಹೊಂದಿದೆ ಎಂದು ಹೇಳಲಾಗಿದೆ. ಇದರ ಬಳಕೆ ಹಿಂದಿನಿಂದಲೂ ಇರುವುದಕ್ಕೆ ಹಲವಾರು ಪುರಾವೆಗಳಿವೆ. ದಾಸವಾಳದ ಚಹಾ ದಾಸವಾಳದ ಒಣಗಿದ ಮತ್ತು ಗಾಢವಾದ ಬಣ್ಣದ ಹೂಗಳ