ಅಡುಗೆಯನ್ನು ಮಾತ್ರ ಸ್ವಾದಿಷ್ಟವಾಗಿಸುವುದಲ್ಲದೇ, ಅನೇಕ ರೋಗಗಳನ್ನು ಗುಣಪಡಿಸುವ ಔಷಧಿಯು ಔದು.ಶುಂಠಿಯಲ್ಲಿನ ತೀಕ್ಷ್ಣವಾದ ಘಾಟು ಮತ್ತು ರುಚಿಗಳು ಅದರಲ್ಲಿನ ಜಿಂಜೆರೋಲ್, ಶೊಗಾಲ್ ಮತ್ತು ಜಿಂಜೆರೋನ್ ಗಳೆಂಬ ಸಸ್ಯತೈಲಗಳ ಮಿಶ್ರಣದಿಂದ ಉಂಟಾಗುತ್ತದೆ.ಶತಮಾನಗಳಿಂದಲೂ ಶುಂಠಿಯನ್ನು ಅಡುಗೆಯಲ್ಲಿ ಸಾಂಬಾರು ಪದಾರ್ಥವಾಗಿ ವ್ಯಾಪಕವಾಗಿ ಬಳಕೆ ಮಾಡುತ್ತಿದ್ದರು ಸಹ, ಇದೊಂದು ದಿವ್ಯೌಷಧವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂಬುದು ನಿಮಗೆ ಗೊತ್ತಾ? ತೂಕ ಇಳಿಕೆ ಮಾಡಿಕೊಳ್ಳಲು, ಅನೇಕ ಅಪಾಯಕಾರಿ ರೋಗಗಳು ಬಾರದಂತೆ ತಡೆಯಲು ಶುಂಠಿ ಸಹಾಯ ಮಾಡುತ್ತದೆ.ಶುಂಠಿಯಲ್ಲಿರುವ ಜಿಂಜರೋಲ್ಸ್ ಎಂಬ ಸಕ್ರಿಯ