ಬೆಂಗಳೂರು: ಮದುವೆ ಬಳಿಕ ಎಲ್ಲರೂ ಕೇಳುವ ಪ್ರಶ್ನೆ ಏನೂ ವಿಶೇಷ ಇಲ್ವಾ? ಇಂದಿನ ಜಗತ್ತಿನಲ್ಲಿ ತಮ್ಮ ವೃತ್ತಿ ಬದುಕಿನಲ್ಲಿ ಮುಳುಗಿರುವ ಮಹಿಳೆಯರು ಬೇಗನೇ ಹಡೆಯಲು ಇಷ್ಟಪಡುವುದಿಲ್ಲ.ಹಾಗಿದ್ದರೆ ಮದುವೆಯಾದ ಮೇಲೆ ಎಷ್ಟು ಮಕ್ಕಳ ಮಾಡಿಕೊಳ್ಳಲು ಎಷ್ಟು ಸಮಯದ ಅಂತರ ಕೊಟ್ಟರೆ ಚೆನ್ನ? ಸಾಮಾನ್ಯವಾಗಿ ಮಹಿಳೆಯರು 20 ರ ಹರೆಯದಲ್ಲಿ ಹೆಚ್ಚು ಫಲವಂತಿಕೆ ಹೊಂದಿರುತ್ತಾರೆ. 35 ವಯಸ್ಸು ದಾಟಿದ ಮೇಲೆ ಅವರ ಫಲವಂತಿಕೆ ಕಡಿಮೆಯಾಗುತ್ತದೆ ಎನ್ನಲಾಗುತ್ತದೆ. ಕೆಲವರಿಗೆ ಬೇಗನೇ ಫಲವಂತಿಕೆ ನಷ್ಟವಾಗುವುದೂ ಇದೆ.