ಬೆಂಗಳೂರು: ದಿನಕ್ಕೊಂದು ಆಪಲ್ ತಿನ್ನುವುದರಿಂದ ವೈದ್ಯರನ್ನು ದೂರವಿಡಬಹುದು ಎಂಬ ಮಾತಿದೆ. ಆದರೆ ಆಪಲ್ ಹೇಗೆ ತಿನ್ನಬೇಕು? ಸಿಪ್ಪೆ ತೆಗೆಯಬೇಕಾ? ಬೇಡವಾ ಎಂಬ ಗೊಂದಲಗಳಿವೆ. ಆಪಲ್ ಸಿಪ್ಪೆ ನಿಜಕ್ಕೂ ಆರೋಗ್ಯಕ್ಕೆ ಒಳ್ಳೆಯದು. ಆಪಲ್ ಸಾಕಷ್ಟು ನಾರಿನಂಶ, ನೀರಿನಂಶವಿರುವ ಹಣ್ಣು. ಇದು ಅಜೀರ್ಣವಾಗಿದ್ದರೆ ಅತ್ಯುತ್ತಮ ನೈಸರ್ಗಿಕ ಮದ್ದೂ ಹೌದು. ಅಲ್ಲದೆ, ಸಾಕಷ್ಟು ರೋಗ ನಿರೋಧಕ ಶಕ್ತಿಯಿರುವ ಇದನ್ನು ಸೇವಿಸುವುದು ನಿಜಕ್ಕೂ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು. ಆದರೆ ಇದರ ಪೋಷಕಾಂಶದ ಮೂಲವಿರುವುದು ಸಿಪ್ಪೆಯಲ್ಲಿ ಎಂದರೆ