ಬೆಂಗಳೂರು : ಕರ್ಪೂರವನ್ನು ದೇವರ ಪೂಜೆಗೆ ಬಳಸುತ್ತಾರೆ. ಆದರೆ ಈ ಕರ್ಪೂರ ದೇವರ ಪೂಜೆಗೆ ಮಾತ್ರವಲ್ಲ ಸೌಂದರ್ಯವನ್ನು ವೃದ್ಧಿಸಿಕೊಳ್ಳಲು ಸಹಕಾರಿಯಾಗಿದೆ. ಹೌದು. ಕರ್ಪೂರ ಹಾಗೂ ತೆಂಗಿನ ಎಣ್ಣೆಯನ್ನು ಮಿಕ್ಸ್ ಮಾಡಿ ಮುಖಕ್ಕೆ ಹಚ್ಚುವುದರಿಂದ ಮೊಡವೆ ಕಡಿಮೆಯಾಗುತ್ತದೆ. ಇದ್ರಿಂದ ಮುಖ ಸ್ವಚ್ಛವಾಗಿ ಕಾಣುತ್ತದೆ. ಬಿಸಿ ನೀರಿಗೆ ಕರ್ಪೂರ ಸೇರಿಸಿ ಇದನ್ನು ಕಾಲಿನ ಹಿಮ್ಮಡಿಗಳಿಗೆ ಹಚ್ಚಿಕೊಳ್ಳುವುದರಿಂದ ಒಡೆದ ಪಾದದ ನೋವು ಕಡಿಮೆಯಾಗುತ್ತದೆ.ಕರ್ಪೂರದ ಎಣ್ಣೆಯನ್ನು ತಲೆಗೆ ಹಚ್ಚಿಕೊಳ್ಳುವುದರಿಂದ ಕೂದಲು ಉದುರುವುದು ಕಡಿಮೆಯಾಗುತ್ತದೆ. ಕೂದಲು ಬಲಗೊಳ್ಳತ್ತದೆ.