ಬೆಂಗಳೂರು: ಮುಟ್ಟಿನ ಸಮಯದಲ್ಲಿ ಯುವತಿಯರಿಗೆ ಹೊಟ್ಟೆ ನೋವಿನ ಸಮಸ್ಯೆ ಹೊಸದೇನಲ್ಲ. ಇಂದು ಇದು ಸಾಮಾನ್ಯವಾಗಿದೆ. ಆದರೆ ಈ ಸಮಯದಲ್ಲಿ ನೋವು ಕಡಿಮೆಯಾಗಬೇಕಾದರೆ ಏನು ಮಾಡಬೇಕು ಗೊತ್ತಾ? ಬೆಲ್ಲ ಅಥವಾ ಬೆಲ್ಲದಲ್ಲಿ ಮಾಡಿದ ಸಿಹಿ ತಿನಿಸನ್ನು ಸೇವಿಸುತ್ತಿದ್ದರೆ ಉತ್ತಮ. ಅದೇ ರೀತಿ ಎಳ್ಳಿನ ಪದಾರ್ಥಗಳು, ಖಾದ್ಯಗಳನ್ನು ಆದಷ್ಟು ಸೇವಿಸಿ. ಜೀರಿಗೆ ಹುರಿದುಕೊಂಡು ಕಷಾಯ ಮಾಡಿ ಅದಕ್ಕೆ ಸ್ವಲ್ಪ ತುಪ್ಪ ಹಾಕಿಕೊಂಡು ಸೇವಿಸುತ್ತಿರಿ.ಈ ಸಮಯದಲ್ಲಿ ಆದಷ್ಟು ಮಸಾಲೆಯುಕ್ತ ಆಹಾರ ಸೇವನೆ ಮಾಡುವುದು ಬೇಡ.