ಬೆಂಗಳೂರು : ಇತ್ತಿಚಿನ ದಿನಗಳಲ್ಲಿ ಹೆಚ್ಚಿನ ಮಹಿಳೆಯರು ಸ್ತನ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ. ಈ ಕಾಯಿಲೆ ಈಗ ಮಹಿಳೆಯರಲ್ಲಿ ಮಾತ್ರವಲ್ಲದೆ ಪುರುಷರಲ್ಲಿಯೂ ಕಂಡುಬರುತ್ತಿದೆ. ಸ್ತನ ಕ್ಯಾನ್ಸರ್ ಗೆ ನಿರ್ದಿಷ್ಟ ಕಾರಣಗಳು ತಿಳಿದುಬಂದಿಲ್ಲ. ಆದರೆ ಕೆಲವು ಅಂಶಗಳನ್ನು ಅಪಾಯಕರ ಅಂಶವೆಂದು ಆರೋಗ್ಯ ತಜ್ಞರು ಗುರುತಿಸಿದ್ದಾರೆ. ಅವುಗಳೆಂದರೆ ಅನುವಂಶೀಯತೆ, ಭೌಗೋಳಿಕ ಅಂಶಗಳು, ಬೊಜ್ಜು , ಆಹಾರದಲ್ಲಿ ಅಧಿಕ ಕೊಬ್ಬಿನಾಂಶದ ಸೇವನೆ, ಅಧಿಕ ಮದ್ಯಮಾನ, ಹಾಗು ಶರೀರದಲ್ಲಿನ ಹಾರ್ಮೋನುಗಳಲ್ಲಿನ ಏರುಪೇರು ಮುಂತಾದವುಗಳು. ಸ್ತನ ಕ್ಯಾನ್ಸರ್