ಎಣ್ಣೆ ಚರ್ಮ ಹಲವು ಜನರಲ್ಲಿ ಸಾಮಾನ್ಯವಾಗಿ ಕಂಡುಬರುವ ಸಮಸ್ಯೆ. ಅದರಲ್ಲೂ ಮಹಿಳೆಯರಿಗೆ ಇದು ಬಹಳ ದೊಡ್ಡ ಸಮಸ್ಯೆಯಾಗಿ ಕಾಡುತ್ತದೆ. ಇದರಿಂದ ಮುಖವು ತುಂಬಾ ಡಲ್ ಆಗಿ ಕಾಣಿಸುತ್ತದೆ ಮತ್ತು ಮೊಡವೆಯ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತದೆ. ಯಾವ ಮೇಕಪ್ ಮಾಡಿಕೊಂಡರೂ ಸರಿಯಾಗುವುದೇ ಇಲ್ಲ. ಇದರಿಂದಾಗಿ ಹಲವರು ಫೇಸ್-ವಾಶ್ಗಳು, ಕ್ರೀಮ್ಗಳು ಮತ್ತು ಲೋಶನ್ಗಳ ಮೊರೆ ಹೋಗುತ್ತಾರೆ. ಆದ್ದರಿಂದ ನೀವು ಅದರ ಬದಲು ಮನೆಯಲ್ಲಿಯೇ ಕೆಲವು ಸಲಹೆಗಳನ್ನು ಪಾಲಿಸಿ ಎಣ್ಣೆ ಚರ್ಮದ ಸಮಸ್ಯೆಯನ್ನು ಹೋಗಲಾಡಿಸಿಕೊಳ್ಳಬಹುದು.