ಬೆಂಗಳೂರು : ಬೇಸಿಗೆಯಲ್ಲಿ ಮೈ ಬೆವರಿನ ವಾಸನೆ ಹೆಚ್ಚಾಗಿರುವುದರಿಂದ ಹೆಚ್ಚಿನವರು ಡಿಯೋಡರೆಂಟ್ ಮೊರೆ ಹೋಗ್ತಾರೆ. ಕೆಲವೊಮ್ಮೆ ಡಿಯೋಡರೆಂಟ್ ಖಾಲಿಯಾಗಿರುತ್ತೆ. ಅಂದೇ ಪಾರ್ಟಿಗೆ ಹೋಗುವ ಸಂದರ್ಭ ಬರುತ್ತೆ. ಆಗ ಚಿಂತೆ ಪಡಬೇಕಾಗಿಲ್ಲ. ಮನೆಯಲ್ಲಿರುವ ಪದಾರ್ಥಗಳನ್ನೇ ಡಿಯೋ ರೀತಿಯಲ್ಲಿ ಬಳಸಬಹುದು. ಪ್ರತಿ ದಿನ ಸ್ನಾನ ಮಾಡುವ ನೀರಿಗೆ ನಿಂಬೆ ರಸವನ್ನು ಮಿಕ್ಸ್ ಮಾಡಿ. ನಿಂಬೆ ರಸ ಬೆರೆಸಿದ ನೀರಿನಲ್ಲಿ ಸ್ನಾನ ಮಾಡುವುದರಿಂದ ದುರ್ಗಂಧ ಕಡಿಮೆಯಾಗಿ ಇಡೀ ದಿನ ನೀವು ಫ್ರೆಶ್ ಆಗಿರುವಂತೆ ಮಾಡುತ್ತದೆ.