ಬೆಂಗಳೂರು : ವಾಲ್ನಟ್ ಆರೋಗ್ಯಕ್ಕೆ ತುಂಬಾ ಉತ್ತಮ. ಹಾಗೇ ಇದರಿಂದ ಚರ್ಮದ ಅಂದವನ್ನು ಕೂಡ ಹೆಚ್ಚಿಸಿಕೊಳ್ಳಬಹುದು. ವಾಲ್ನಟ್ ಫೇಸ್ ಸ್ಕ್ರಬ್ ಅತ್ಯಂತ ಪರಿಣಾಮಕಾರಿ ಚರ್ಮದ ಚಿಕಿತ್ಸೆಯಾಗಿದೆ. ಇದು ಸತ್ತ ಚರ್ಮಕೋಶಗಳನ್ನು ನಿವಾರಿಸಿ ನೈಸರ್ಗಿಕ ಹೊಳಪನ್ನು ನೀಡುತ್ತದೆ. ಮೊಡವೆಗಳು, ಗುಳ್ಳೆಗಳು, ಸೋಂಕುಗಳಿಂದ ಇದು ದೂರವಿರಿಸುತ್ತದೆ.