ಬೆಂಗಳೂರು : ಮಕ್ಕಳಿಗೆ ತಾಯಿ ಹಾಲು ತುಂಬಾ ಅಮೂಲ್ಯವಾದದ್ದು. ತಾಯಿ ಹಾಲು ಮಗುವಿಗೆ ಸರಿಯಾಗಿ ದೊರೆಯದಿದ್ದರೆ ಅದರ ಬೆಳವಣಿಗೆ ಹಾಗು ಬುದ್ಧಿಶಕ್ತಿ ಕುಂಠಿತವಾಗುತ್ತದೆ. ಅದಕ್ಕಾಗಿ ತಾಯಿಯ ಹಾಲನ್ನು ಮಗುವಿನ ಪಾಲಿನ ಅಮೃತ ಎನ್ನುತ್ತಾರೆ. ಕೆಲವು ತಾಯಿಯಂದಿರಿಗೆ ಎದೆ ಹಾಲು ಸರಿಯಾಗಿ ಉತ್ಪತ್ತಿಯಾಗುವುದಿಲ್ಲ. ಇದರಿಂದ ಮಗುವಿಗೆ ಸರಿಯಾಗಿ ಹಾಲು ಕೂಡ ಸಿಗುವುದಿಲ್ಲ. ಆದ್ದರಿಂದ ಎದೆ ಹಾಲು ಉತ್ಪತ್ತಿಯಾಗಲು ಕೆಲವು ಮನೆಮದ್ದುಗಳಿವೆ. ಅವುಗಳನ್ನು ಬಳಸಿದರೆ ಈ ಸಮಸ್ಯೆ ದೂರವಾಗುತ್ತದೆ.