ಬೆಂಗಳೂರು: ಹೆಚ್ಚಿನವರಿಗೆ ತೂಕ ಕಳೆದುಕೊಳ್ಳುವುದು ಹೇಗೆಂಬ ಚಿಂತೆ. ಅದಕ್ಕೆ ಏನೇನೋ ಮಾಡುವ ಬದಲು, ಆಹಾರ ಕ್ರಮದಲ್ಲಿ ಸ್ವಲ್ಪ ವ್ಯತ್ಯಾಸ ಮಾಡಿಕೊಂಡರೂ ಸಾಕು. ಆದಷ್ಟು ಬಿಸ್ಕತ್ತು, ಚಾಕಲೇಟ್ ಗಳಂತಹ ಆಹಾರ ವಸ್ತುಗಳ ಸೇವನೆ ಕಡಿಮೆ ಮಾಡಿ. ಇದು ಹಸಿವು ಮರೆಸುವುದಲ್ಲದೆ, ದೇಹದಲ್ಲಿ ಅನಗತ್ಯ ಕೊಬ್ಬು ಸಂಗ್ರಹಣೆಗೆ ಕಾರಣವಾಗುತ್ತದೆ. ಹಾಗಿದ್ದರೂ, ಚಿಪ್ಸ್ ನಂತಹ ಕುರುಕಲು ತಿಂಡಿ ತಿನ್ನದೇ ಮನಸ್ಸು ತಡೆಯುವುದಿಲ್ಲ ಎಂದಾದರೆ, ಅದನ್ನು ಭರ್ಜರಿ ಊಟವಾದ ತಕ್ಷಣ ತಿನ್ನಬೇಡಿ.ನಮಗೆಲ್ಲಾ ಒಂದು ಅಭ್ಯಾಸವಿದೆ.