ಬೆಂಗಳೂರು: ಚಳಿಗಾಲ, ಮಳೆಗಾಲ ಬಂತೆಂದರೆ ನೆಗಡಿಯ ಕಿರಿ ಕಿರಿ ತಪ್ಪಲ್ಲ. ಸಣ್ಣ ಅನಾರೋಗ್ಯವಾದರೂ ವಿಪರೀತ ಕಿರಿ ಕಿರಿ ಕೊಡುವ ಶೀತದಿಂದ ಪಾರಾಗುವುದು ಹೇಗೆ?ಶೀತ ಬರುವ ಮೊದಲೇ ತಡೆಗಟ್ಟಬೇಕಾದರೆ ಸಾಕಷ್ಟು ವಿಟಮಿನ್ ಡಿ ಅಂಶವನ್ನು ದೇಹಕ್ಕೆ ಒದಗಿಸಬೇಕು. ಆಹಾರ ಮಾತ್ರವಲ್ಲದೆ, ಬೆಳಗಿನ ಸೂರ್ಯನ ಕಿರಣಗಳನ್ನು ಮೈಗೊಡ್ಡುವುದರಿಂದಲೂ ವಿಟಮಿನ್ ಡಿ ಅಂಶ ದೇಹ ಸೇರುವುದು.ಇದಲ್ಲದೆ, ಆದಷ್ಟು ನಮ್ಮ ಕೈ, ಬಾಯಿ ಶುದ್ಧವಾಗಿಟ್ಟುಕೊಳ್ಳುವುದು ಮುಖ್ಯ. ಹೊರಗೆ ಹೋಗಿ ಬಂದ ತಕ್ಷಣ ಕೈತೊಳೆದುಕೊಳ್ಳುವುದು ಮುಖ್ಯ. ಇದರಿಂದ