ಬೆಂಗಳೂರು: ಆಧುನಿಕ ಜೀವನದ ಶೈಲಿಯ ಪ್ರಭಾವವೋ ಇತ್ತೀಚೆಗೆ ಹೃದಯಾಘಾತಕ್ಕೊಳಗಾಗುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಇದನ್ನು ತಡೆಯಲು ಏನು ಮಾಡಬೇಕು? ಇಲ್ಲಿ ನೋಡಿ!ಚೆನ್ನಾಗಿ ತಿನ್ನಿ ಪೋಷಕಾಂಶ ಭರಿತ ಆಹಾರ, ಹಣ್ಣು ಹಂಪಲುಗಳನ್ನು ಹೇರಳವಾಗಿ ಸೇವಿಸಿ. ಬೇಡದ ಕೊಬ್ಬಿನಂಶವಿರುವ ಆಹಾರವನ್ನು ಆದಷ್ಟು ಕಡಿಮೆ ಮಾಡಿ.ನಿಯಮಿತ ವ್ಯಾಯಾಮ ಆಹಾರ ಸೇವಿಸಿದ ಹಾಗೆಯೇ ದೇಹಕ್ಕೆ ವ್ಯಾಯಾಮವೂ ಬೇಕು. ಚಟುವಟಿಕೆಯಿದ್ದರೆ ಮಾತ್ರ ಲವಲವಿಕೆಯಿಂದ ಇರಲು ಸಾಧ್ಯ. ಚೆನ್ನಾಗಿ ತಿಂದು ಕೂತು ದೇಹ ಬೆಳೆಸಿದರೆ ಹೃದಯದ ಆರೋಗ್ಯ ಹಾಳಾಗುವುದು ಖಂಡಿತಾ.