ಬೆಂಗಳೂರು: ಮಳೆಗಾಲ ಅಂದ್ರೆ ಮೋಜು ಮಸ್ತಿಗೆ ಬ್ರೇಕ್ ಇರೋದಿಲ್ಲ. ಆದರೆ ಈ ಕಾಲದಲ್ಲಿ ಸ್ವಲ್ಪ ಜಾಗ್ರತೆ ವಹಿಸದಿದ್ದರೆ ರೋಗಗಳ ಸರಮಾಲೆಯೇ ಶುರುವಾಗುತ್ತೆ. ಶೀತ, ಜ್ವರ, ಕೆಮ್ಮು ಹೀಗೆ ವಿವಿಧ ಕಾಯಿಲೆಗಳು ನಮ್ಮ ಜೀವ ಹಿಂಡುತ್ತವೆ. ಇದಕ್ಕಾಗಿಯೇ ಕಾಯಿಲೆ ಬರೋದಕ್ಕೂ ಮೊದಲೇ ಎಚ್ಚೆತ್ತುಕೊಳ್ಳೋದು ಒಳಿತಲ್ಲವೆ… ಮಳೆಗಾಲದ ರೋಗ ರುಜಿನಗಳಿಂದ ದೂರವಿರಬೇಕಾದ್ರೆ ನಿಮಗೆ ಪ್ರಿಯವಾದ ಈ ಆಹಾರಗಳನ್ನ ದೂರವಿಡಿ. ಕರಿದ ತಿನಿಸುಗಳು ಮಳೆಗಾಲದ ಚುಮು ಚುಮು ಚಳಿಗೆ ಎಣ್ಣೆಯಲ್ಲಿ ಕರಿದ ತಿಂಡಿಗಳು ನಾಲಿಗೆಗೆ