ಬೆಂಗಳೂರು: ಹೆಣ್ಣುಮಕ್ಕಳಿಗೆ ಸೀರೆ ಎಂದರೆ ಬಲು ಇಷ್ಟ. ಹಾಗೋ ಹೀಗೂ ದುಡ್ಡು ಕೂಡಿಟ್ಟುಕೊಂಡು ದುಬಾರಿಯಾದ ರೇಷ್ಮೆ ಸೀರೆ ಕೊಂಡುಕೊಳ್ಳುತ್ತೇವೆ. ವರುಷವಾಗುವುದೊಳಗೆ ಅದು ತನ್ನ ಮೊದಲಿನ ಸೊಬಗು ಕಳೆದುಕೊಂಡರೆ ತುಂಬ ಬೇಸರವಾಗುತ್ತದೆ. ರೇಷ್ಮೆ ಸೀರೆಯನ್ನು ನಾಜೂಕಾಗಿ ಕಾಪಾಡಿಕೊಳ್ಳಬೇಕಾಗುತ್ತದೆ. ಇಲ್ಲಿದೆ ನೋಡಿ ಒಂದಷ್ಟು ಟಿಪ್ಸ್. ಇದನ್ನು ಅನುಸರಿಸಿ ನಿಮ್ಮಿಷ್ಟದ ಸೀರೆಯನ್ನು ಕಾಪಾಡಿಕೊಳ್ಳಿ. ಹತ್ತಿ ಬಟ್ಟೆಯಲ್ಲಿ ಸುತ್ತಿಡಿ : ನಿಮ್ಮ ಸೀರೆಯನ್ನು ಹೊಸದರಂತೆ ಕಾಪಾಡಲು ಒಂದು ಅಗಲವಾದ ಹತ್ತಿ ಬಟ್ಟೆಯಲ್ಲಿ ಸೀರೆಯನ್ನು ಸುತ್ತಿ ಇಡಿ.ಬಿಸಿಲಿಗೆ