ಬೆಂಗಳೂರು : ಪ್ರಶ್ನೆ : ನನಗೆ ಮದುವೆಯಾಗಿ 20 ವರ್ಷವಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ನಾವಿಬ್ಬರು ಒಬ್ಬರನೊಬ್ಬರು ತುಂಬಾ ಪ್ರೀತಿಸುತ್ತೇವೆ. ಆದರೆ ನನಗೆ ಮದುವೆಯಾದಾಗಿನಿಂದ ಸೆಕ್ಸ್ ವಿಚಾರದಲ್ಲಿ ತೃಪ್ತಿ ಸಿಗುತ್ತಿಲ್ಲ. ಅಲ್ಲದೇ ತನ್ನ ಪತ್ನಿ ನನಗೆ ಕಿಸ್ ಕೊಡಲು ಸಹ ಇಷ್ಟಪಡುತ್ತಿಲ್ಲ. ನಾನು ಪ್ರತಿದಿನ ಸೆಕ್ಸ್ ಮಾಡಲು ಇಷ್ಟಪಡುತ್ತೇನೆ. ಆದರೆ ನನ್ನ ಪತ್ನಿಗೆ ಅದು ಇಷ್ಟವಿಲ್ಲ. ಕೆಲವೊಮ್ಮೆ ನಾನು ಬೇಸರಗೊಂಡಾಗ ನನಗೆ ಸಮಾಧಾನ ಮಾಡಲು ಸೆಕ್ಸ್ ಮಾಡುತ್ತಾಳೆ. ಆಕೆಯ ಜೊತೆ ವೈದ್ಯರು ಹಾಗೂ ಕುಟುಂಬದವರು ಮಾತನಾಡಿದರೂ ಏನು ಪ್ರಯೋಜನವಾಗಲಿಲ್ಲ. ಆದ್ದರಿಂದ ನಾನು ಆಕೆಯನ್ನು ಬಿಟ್ಟುಬಿಡುವ ನಿರ್ಧಾರ ಮಾಡಿದ್ದೇನೆ. ಹಾಗೇ ನನ್ನ ಉಳಿದ ಜೀವನವನ್ನು ಸೆಕ್ಸ್ ಇಷ್ಟಪಡುವವರ ಜೊತೆ ಕಳೆಯಲು ನಿರ್ಧರಿಸಿದ್ದೇನೆ. ಈ ವಿಚಾರದಲ್ಲಿ ನನಗೆ ಸ್ವಲ್ಪ ಗೊಂದಲವಿದೆ. ದಯವಿಟ್ಟು ಪರಿಹಾರ ತಿಳಿಸಿ.