ಬೆಂಗಳೂರು : ತುಂಬಾ ಕೋಲ್ಡ್ ವಸ್ತುಗಳನ್ನು ಸೇವಿಸಿದಾಗ ಗಂಟಲಿನಲ್ಲಿ ಇನ್ ಫೆಕ್ಷನ್ ಆಗುತ್ತದೆ. ಇದರಿಂದ ಗಂಟಲಿನಲ್ಲಿ ತುಂಬಾ ನೋವು ಕಾಣಿಸಿಕೊಳ್ಳುತ್ತದೆ. ಅದರ ಜೊತೆಗೆ ಕಿವಿ ನೋವು ಕಾಣಿಸಿಕೊಳ್ಳುತ್ತದೆ. ಇದು ಬೇಗ ವಾಸಿಯಾಗಲು ಈ ಮನೆಮದ್ದನ್ನು ಬಳಸಿ. ಶುಂಠಿ ½ ಚಮಚ ಹಾಗೂ ಬೆಲ್ಲ1/2 ಚಮಚ ಇವೆರಡನ್ನು ಸೇರಿಸಿ ಚೆನ್ನಾಗಿ ಜಜ್ಜಿ ಪೇಸ್ಟ್ ಮಾಡಿಕೊಂಡು ಪ್ರತಿದಿನ ಬೆಳಿಗ್ಗೆ, ಮಧ್ಯಾಹ್ನ ಹಾಗೂ ರಾತ್ರಿ ಮೂರು ಹೊತ್ತು ಊಟಕ್ಕಿಂತ ½ ಗಂಟೆ ಮೊದಲು ತಿನ್ನಿ.