ಬೆಂಗಳೂರು : ಕೆಲವರು ಬಾಯಿಯ ದುರ್ವಾಸನೆಯನ್ನು ಹೋಗಲಾಡಿಸಲು ಚ್ಯೂಯಿಂಗ್ ಗಮ್ ಜಗಿಯುತ್ತಾರೆ. ಇನ್ನು ಕೆಲವರು ಟೈಪಾಸ್ ಗಾಗಿ ಇದನ್ನು ತಿನ್ನತ್ತಾರೆ. ಆದರೆ ಇದು ನಮ್ಮ ದೇಹದ ತೂಕ ಇಳಿಸಿಕೊಳ್ಳಲು ಸಹಕಾರಿಯಾಗಿದೆಯೇ ಎಂಬುದಕ್ಕೆ ಇಲ್ಲಿದೆ ನೋಡಿ ಮಾಹಿತಿ. ಯಾವುದೇ ಮಿತ, ಹಿತ ಆಹಾರ ಮತ್ತು ವ್ಯಾಯಾಮವಿಲ್ಲದೆ ಕೇವಲ ಚ್ಯೂಯಿಂಗ್ ಗಮ್ ಮೆಲ್ಲುವುದರಿಂದ ಕೊಬ್ಬು ಕರಗಿಸಬಹುದೆಂದು ನೀವು ಅಂದುಕೊಂಡರೆ ಅದು ತಪ್ಪು. ಆದರೆ ಇದರಿಂದ ಸ್ವಲ್ಪ ಮಟ್ಟಿಗೆ ಸಹಾಯ ಮಾಡುವುದಂತೂ ಸತ್ಯ. ಅದು