ಬೆಂಗಳೂರು : ಇತ್ತೀಚೆಗೆ ಮನುಷ್ಯರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತಾ ಬರುತ್ತಿದೆ. ಇದಕ್ಕೆ ಮೊದಲು ತುತ್ತಾಗುವವರು ಎಂದರೆ ವಯಸ್ಸಾದವರು, ಮಕ್ಕಳು ಮತ್ತು ಮಹಿಳೆಯರು. ವ್ಯಾಯಾಮ, ಉತ್ತಮ ಆರೋಗ್ಯ ಪದ್ಧತಿ, ಆಹಾರಗಳನ್ನು ಸೇವಿಸುವುದರ ಜೊತೆಗೆ ಒಂದಷ್ಟು ಹಣ್ಣುಗಳನ್ನು ತಿಂದರೂ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಹಾಗಿದ್ದರೆ ಆ ಹಣ್ಣುಗಳು ಯಾವುದು ಎಂಬುದನ್ನು ಈಗ ನೋಡೋಣ.* ಪಪ್ಪಾಯಿಯಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ದೇಹದಲ್ಲಿ ಪ್ರತಿರೋಧಕ ಶಕ್ತಿ ಹೆಚ್ಚಲು ಇದು ಬೇಕು. ಈ ಹಣ್ಣಿನಲ್ಲಿರುವ ನಾರಿನಾಂಶವು