ಬೆಂಗಳೂರು : ಟೊಮೆಟೊ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದರೆ ಅತಿಯಾದರೆ ಅಮೃತವು ವಿಷವಾಗುತ್ತದೆ ಎಂಬಂತೆ ಅತಿಯಾಗಿ ಟೊಮೆಟೊ ಸೇವಿಸಿದರೆ ಹಲವಾರು ರೀತಿಯ ಅಡ್ಡ ಪರಿಣಾಮಗಳು ಆಗಬಹುದು. *ಅತಿಯಾಗಿ ಟೊಮೆಟೊ ಸೇವಿಸಿದರೆ ಟೊಮೆಟೋದಲ್ಲಿರುವ ಸಲ್ಮೊನೆಲ್ಲಾ ಅಂಶದಿಂದ ಹೊಟ್ಟೆ ಉಬ್ಬರ, ಭೇದಿ ಉಂಟಾಗಬಹುದು. * ಟೊಮೆಟೋದಲ್ಲಿ ಇರುವ ಮೆಲಿಕ್ ಮತ್ತು ಸಿಟ್ರಿಕ್ ಆಮ್ಲವು ಅತಿಯಾಗಿ ಆಮ್ಲ ಉತ್ಪತ್ತಿ ಮಾಡುವುದು. ಇದರಿಂದ ಆಮ್ಲವು ಹಿಮ್ಮುಖವಾಗಿ ಹರಿಯುವುದು. ಜಠರ ಹಿಮ್ಮುಖ ಹರಿವು ರೋಗ(ಜಿಇಆರ್ ಡಿ)ದ ಸಮಸ್ಯೆಯಿರುವವರಿಗೆ