ಬೆಂಗಳೂರು : ಹೆಚ್ಚಿನವರಿಗೆ ಯಾವುದಾದರೂ ವಸ್ತುವನ್ನು ನೋಡುವಾಗ ಕಣ್ಣಿನಿಂದ ನೀರು ಬರುತ್ತದೆ. ಹಾಗೇ ಪದೇ ಪದೇ ಕಣ್ಣಿನಲ್ಲಿ ಚುಚ್ಚಿದಂತಾಗುತ್ತದೆ, ಕಣ್ಣು ಉರಿಯುತ್ತದೆ. ಇಂತಹ ಸಮಸ್ಯೆಗಳಿರುವವರು ಈ ಮನೆಮದ್ದನ್ನು ಬಳಸಿ ನಿಮ್ಮ ಕಣ್ಣಿನ ಸಮಸ್ಯೆಯನ್ನು ನಿವಾರಿಸಿಕೊಳ್ಳಿ. 1 ಈರುಳ್ಳಿ ತೆಗೆದುಕೊಂಡು ಅದಕ್ಕೆ ನೀರು ಹಾಕದೇ ಪೇಸ್ಟ್ ಮಾಡಿಕೊಳ್ಳಿ. ಅದನ್ನು ಬಟ್ಟೆಯಲ್ಲಿ ಸೋಸಿ. ಇದರಿಂದ ರಸ ಸಿಗುತ್ತೆ. ಅದನ್ನು ಕ್ಲೀನ್ ಆಗಿರುವ ಹತ್ತಿ ಉಂಡೆಯಿಂದ ತೆಗೆದುಕೊಂಡು 2 ಕಣ್ಣಿಗೆ ಒಂದೊಂದು ಹನಿ ಹಾಕಬೇಕು.