ಪ್ರತಿದಿನ ಬೆಳಗ್ಗೆ ಸ್ವಲ್ಪವಾದರೂ ಬೆಲ್ಲ ತಿನ್ನಬೇಕು ಎನ್ನುವುದು ಮಲೆನಾಡಿನಲ್ಲಿ ಚಾಲ್ತಿಯಲ್ಲಿರುವ ಅಲಿಖಿತ ನಿಯಮ. ಮಕ್ಕಳಿಗಂತೂ ಕಡ್ಡಾಯವಾಗಿ ಬೆಲ್ಲ ನೀಡಲಾಗುತ್ತದೆ. ಜೋನಿಬೆಲ್ಲದೊಂದಿಗೆ ತುಪ್ಪ ಸೇರಿಸಿ ತಿನ್ನುವುದು ಮಜವೇ ಮಜ. ಅದರ ಮುಂದೆ ಬೇರ್ಯಾವ ಸಿಹಿಯೂ ಇಲ್ಲ. ಅಷ್ಟು ಖುಷಿ ಸಿಗುತ್ತದೆ. ಕೇವಲ ಖುಷಿ ಮಾತ್ರವಲ್ಲ. ಬೆಲ್ಲದಿಂದ ದೇಹಕ್ಕೆ ಸದೃಢತೆಯೂ ದೊರೆಯುತ್ತದೆ. ಸಕ್ಕರೆಯ ಸಿಹಿ ದೇಹಕ್ಕೆ ಒಳ್ಳೆಯದಲ್ಲ. ಬದಲಿಗೆ ಬೆಲ್ಲ ತಿನ್ನುವುದು ಅತಿ ಉತ್ತಮ.ಬೇಸಿಗೆಯ ಮಧ್ಯಾಹ್ನದ ಸಮಯದಲ್ಲಿ ಬೆಲ್ಲ-ಮಜ್ಜಿಗೆಯ ಹೊಂದಾಣಿಕೆ ದೇಹಕ್ಕೆ