ರಾತ್ರಿಯ ನಿದ್ರೆ ಎಷ್ಟು ಮುಖ್ಯ ಎಂಬುದು ಬಹುತೇಕರಿಗೆ ತಿಳಿದಿಲ್ಲ. ಒಳ್ಳೆಯ ನಿದ್ರೆಯಿಂದ ದೇಹಕ್ಕೆ ವಿಶ್ರಾಂತಿ ಸಿಗುವುದು ಮಾತ್ರವಲ್ಲದೆ ತೂಕವನ್ನು ಇಳಿಸಲು ಕೂಡ ಸಹಾಯವಾಗುತ್ತದೆ. ಮಾನಸಿಕ ಮತ್ತು ದೈಹಿಕ ಆಯಾಸದಿಂದ ಮುಕ್ತಿ ಪಡೆಯಲು, ನವ ಚೈತನ್ಯವನ್ನು ಪಡೆಯಲು ನಿದ್ರೆ ಸಹಾಯ ಮಾಡುತ್ತದೆ. ಆದರೂ ಕೆಲವು ಕಾರಣಗಳಿಂದಾಗಿ ನೀವು ಸಾಕಷ್ಟು ಪ್ರಮಾಣದ ನಿದ್ರೆ ಮಾಡಲು ಸಾಧ್ಯವಾಗದಿದ್ದರೆ ಅದು ಒತ್ತಡ, ಕಿರಿಕಿರಿಗೆ ಕಾರಣವಾಗುತ್ತದೆ. ನಿದ್ರೆ ಸಮಸ್ಯೆಯಿಂದ ಬಳಲುವ ರೋಗಿಗಳಿಗೆ ನಿದ್ರೆ ಮಾಡುವಾಗ ಉಸಿರಾಟದ ತೊಂದರೆ