ಬೆಂಗಳೂರು: ಜನನ ನಿಯಂತ್ರಣಕ್ಕೆ ಸುಲಭವಾಗಿ ಎಲ್ಲರೂ ಮಾಡುವುದು ಮಾತ್ರೆಗಳನ್ನು ತೆಗೆದುಕೊಳ್ಳುವುದು. ಆದರೆ ಮಾತ್ರೆಗಳು ಯಾವತ್ತಿಗೂ ಸುರಕ್ಷಿತವಲ್ಲ ಎಂದು ತಜ್ಞರೂ ಹೇಳುತ್ತಾರೆ. ಗರ್ಭನಿರೋಧಕ ಗುಳಿಗೆಗಳು, ನೇರವಾಗಿ ಹಾರ್ಮೋನ್ ನಿಯಂತ್ರಿಸಿ ತಮ್ಮ ಕೆಲಸ ಮಾಡುತ್ತವೆ. ಮಾತ್ರೆ ತೆಗೆದುಕೊಳ್ಳುವುದು ಸುಲಭ ಎನಿಸಿದರೂ ಇದರ ಪರಿಣಾಮಗಳು ಮಾತ್ರ ಅಪಾಯಕಾರಿ.ಗರ್ಭನಿರೋಧಕ ಗುಳಿಗೆಗಳಿಂದ ಅನಿಯಂತ್ರಿತ ಮುಟ್ಟು, ಅತಿಯಾದ ಋತುಸ್ರಾವ, ನೋವಿನಿಂದ ಕೂಡಿದ ಮುಟ್ಟು, ತಲೆ ಸುತ್ತಿದಂತಾಗವುದು, ಸ್ತನಗಳ ನೋವು, ತೂಕ ಹೆಚ್ಚುವುದು, ಮೂಡ್ ಚೇಂಜ್, ಬಿಳಿ ಮುಟ್ಟು,