ಬೆಂಗಳೂರು: ಅನಾರೋಗ್ಯವಿದ್ದಾಗ ಮಾತ್ರೆ ಸೇವಿಸಬೇಕೆಂದರೆ ಎಲ್ಲರಿಗೂ ಅದೇನೋ ಹಿಂಜರಿಕೆ. ಚಿಕ್ಕವರಾದರೂ, ದೊಡ್ಡವರಾದರೂ ಮಾತ್ರೆ ಸೇವಿಸಲು ಮುಖ ಸಿಂಡರಿಸುತ್ತಾರೆ. ಹಾಗಾಗಿ ತಮಗೆ ಇಷ್ಟ ಬಂದಂತೆ ಹೊಟ್ಟೆ ಸೇರಲು ತಂಪು ಪಾನೀಯ ಬಳಸಿ ಮಾತ್ರೆ ಸೇವಿಸುವವರಿದ್ದಾರೆ. ಆದರೆ ಇದು ತಪ್ಪು ಎನ್ನುತ್ತಾರೆ ತಜ್ಞರು. ತಂಪು ಪಾನೀಯ ಬಳಸಿ ಮಾತ್ರೆ ಸೇವಿಸುವುದರಿಂದ ಮಾತ್ರೆ ಹಾಗೂ ತಂಪು ಪಾನೀಯ ಎರಡೂ ಪ್ರತಿಕ್ರಿಯೆ ನೀಡುವ ಸಂಭವವಿರುತ್ತದೆ. ಇದು ಆರೋಗ್ಯದ ಮೇಲೆ ಇನ್ನಷ್ಟು ದುಷ್ಪರಿಣಾಮ ಬೀರುತ್ತದೆ ಎನ್ನುವುದು