ಶೀತ, ನೆಗಡಿ, ಕೆಮ್ಮು ಇತ್ಯಾದಿಗಳು ಚಳಿಗಾಲದಲ್ಲಿ ಸಾಮಾನ್ಯವಾಗಿ ಕಾಡುವಂತಹ ಸಮಸ್ಯೆಗಳು. ಸೋರುವ ಮೂಗು, ತಲೆನೋವು, ದೇಹದ ನೋವು ಮತ್ತು ಗಂಟಲಿನ ಊತವು ದಿನನಿತ್ಯದ ಕಾರ್ಯಗಳನ್ನು ಮಾಡಲು ತುಂಬಾ ತೊಂದರೆ ನೀಡುವುದು. ಮೈನಡುಗುವಂತಹ ಚಳಿಯಲ್ಲಿ ಶೀತವು ಇದ್ದರೆ ಆಗ ನಮಗೆ ಏನಾದರೂ ಬಿಸಿ ಬಿಸಿಯಾಗಿರುವುದನ್ನು ಕುಡಿಯಬೇಕು ಎಂದು ಅನಿಸುವುದು ಇದೆ. ಚಳಿಗಾಲದಲ್ಲಿ ಸಾಮಾನ್ಯವಾಗಿ ಸೂಪ್ನಂತಹ ಬಿಸಿ ಪಾನೀಯಗಳನ್ನು ಕುಡಿದರೆ ತುಂಬಾ ಲಾಭಕಾರಿ. ಆದರೆ ಶೀತ ಬರದಂತೆ ತಡೆಯಲು ಕೆಲವೊಂದು ಉಪಾಯಗಳು ಇವೆ.