ಮದುವೆಗೆ ಹುಡುಗಿ ಸಿಕ್ಕಿಲ್ಲ ಅಂತ ಆಂಟಿ ಜೊತೆ ಸುಖಿಸೋದು ಸರಿನಾ?

ಬೆಂಗಳೂರು| Jagadeesh| Last Modified ಗುರುವಾರ, 7 ನವೆಂಬರ್ 2019 (20:43 IST)
ಪ್ರಶ್ನೆ: ನಾನು 35 ವರ್ಷದ ಯುವಕ. ಇನ್ನೂ ಮದುವೆಯಾಗಿಲ್ಲ. ನಮ್ಮ ಸಮುದಾಯದಲ್ಲಿ ಮದುವೆಗಾಗಿ ಹುಡುಗಿಯನ್ನು ಹುಡುಕಿ ಸಾಕಾಗಿ ಹೋಗಿದೆ. ಎಲ್ಲೂ ಹುಡುಗಿ ಸೆಟ್ ಆಗ್ತಿಲ್ಲ.


ಈ ನಡುವೆ ವಯಸ್ಸೂ ಹೆಚ್ಚಾಗುತ್ತಿದೆ. ಹೀಗಾಗಿ ವಯೋಸಹಜ ಆಕರ್ಷಣೆ ಹಾಗೂ ಕುತೂಹಲಕ್ಕಾಗಿ ನಾನು ಆಂಟಿಯೊಬ್ಬಳನ್ನು ಲವ್ ಮಾಡಿರುವೆ. ಅವಳೊಂದಿಗೆ ಸಂಭೋಗ ನಡೆಸುತ್ತಿರುವೆ. ಆದರೆ ನಾನು ಮದುವೆಯಾದ ಮೇಲೆ ನನ್ನ ಮಡದಿಗೆ ಲೈಂಗಿಕ ರೋಗಗಳು ಬರಬಹುದಾ?

ಉತ್ತರ: ಹಗಲು ಕಂಡ ಬಾವಿಗೆ ರಾತ್ರಿ ಬೀಳೋದು ಅಂತ ಹಿರಿಯರು ನಿಮ್ಮ ಈ ನಡೆ ನೋಡಿಯೇ ಹೇಳಿರಬೇಕು. ಆಂಟಿಯ ಸಹವಾಸ ಬಿಟ್ಟುಬಿಡಿ. ಅಸುರಕ್ಷಿತ ಲೈಂಗಿಕ ಕ್ರಿಯೆಯಿಂದ ಏಡ್ಸ್ ನಂತಹ ಮಾರಕ ಕಾಯಿಲೆಗಳು ನಿಮ್ಮ ಜೀವವನ್ನೇ ಬಲಿ ತೆಗೆದುಕೊಳ್ಳಬಲ್ಲದು. ಆಕರ್ಷಣೆ ಹಾಗೂ ವಯೋಸಹಜ ಕುತೂಹಲಕ್ಕೆ ನೀವು ಮಾಡಿದ್ದು ತಪ್ಪು.

ನಿಮ್ಮ ಪತ್ನಿಯೂ ನಿಮ್ಮಂತೆ ನಿಮ್ಮ ಮದುವೆಗೂ ಮೊದಲೇ ಬೇರೋಬ್ಬರ ಜತೆ ಇದನ್ನೇ ಮಾಡ್ತಿದ್ದರೆ ಆಗ ಅವರನ್ನು ನೀವು ಸ್ವೀಕಾರ ಮಾಡ್ತಿದ್ದರಾ? ಇಲ್ಲಾ ತಾನೇ? ನೀವು ಪರಿಶುದ್ಧ ಹೆಣ್ಣನ್ನು ಮದುವೆಗೆ ಆಸೆ ಪಡುವಂತೆ ಆಕೆ ಕೂಡ ನನ್ನ ಗಂಡ ಶ್ರೀರಾಮ ನಂತೆ ಇರಲಿ ಎಂದುಕೊಂಡಿರುತ್ತಾಳೆ. ನಿಮ್ಮ ಕ್ಷಣಿಕ ಸುಖಕ್ಕಾಗಿ ಭವಿಷ್ಯವನ್ನ ಬಲಿಕೊಡಬೇಡಿ. ಒಳ್ಳೆಯ ತನ ರೂಢಿಸಿಕೊಳ್ಳಿ. ಖಂಡಿತವಾಗಿ ಉತ್ತಮ ಹುಡುಗಿ ನಿಮ್ಮ ಪತ್ನಿಯಾಗುತ್ತಾಳೆ.

ಇದರಲ್ಲಿ ಇನ್ನಷ್ಟು ಓದಿ :