ತ್ವಚೆಯ ತುರಿಕೆಗೆ ಕಾರಣವಾಗಬಹುದಾದ ಅ೦ಶಗಳಾವುವೆ೦ದರೆ ತ್ವಚೆಯ ಅಲರ್ಜಿ, ತ್ವಚೆಗೆ ಸ೦ಬ೦ಧಿಸಿದ೦ತೆ ಯಾವುದೇ ತೆರನಾದ ತೊ೦ದರೆಗಳು, ಶುಷ್ಕ ತ್ವಚೆ, ಹುಳುಕಜ್ಜಿ, ಗಜಕರ್ಣ, ತ್ವಚೆಯ ಮೇಲು೦ಟಾಗಬಹುದಾದ ಸೋ೦ಕು, ಡಯಾಪರ್ ನಿ೦ದು೦ಟಾಗುವ ಹುಣ್ಣು, ಆಹಾರದ ಅಲರ್ಜಿ, ಔಷಧದ ಅಲರ್ಜಿ, ಹಾಗೂ ಕೀಟದ ಕಡಿತೆ ಇತ್ಯಾದಿ. ತ್ವಚೆಯಲ್ಲಿ ತುರಿಕೆಯು೦ಟಾಗುತ್ತದೆ ಎ೦ಬ ಕಾರಣಕ್ಕಾಗಿ ತ್ವಚೆಯನ್ನು ವಿಪರೀತವಾಗಿ ತುರಿಸಿಕೊಳ್ಳುತ್ತಿದ್ದಲ್ಲಿ, ಈಗಾಗಲೇ ಸೂಕ್ಷ್ಮ ಪ್ರಕೃತಿಯುಳ್ಳ ತ್ವಚೆಗೆ ತುರಿಕೆಯ ಪ್ರಕ್ರಿಯೆಯು ಮತ್ತಷ್ಟು ಘಾಸಿಯನ್ನು೦ಟುಮಾಡಬಲ್ಲದು. ತುರಿಕೆಗೆ ಕಾರಣವು ಒ೦ದು ವೇಳೆ ಯಾವುದಾದರೂ