ಬೆಂಗಳೂರು: ನಿಮ್ಮ ದೇಹದದಲ್ಲಿ ಉಷ್ಣಾಂಶ ಹೆಚ್ಚಾದರೆ ಆರೋಗ್ಯದಲ್ಲಿ ಕೂಡ ಏರುಪೇರಾಗುತ್ತದೆ.. ಆದ್ದರಿಂದ ದೇಹವನ್ನು ತಂಪುಗೊಳಿಸಲು ಮನೆಯಲ್ಲೇ ಸಿಗುವ ಪದಾರ್ಥಗಳ ಪಾನಕ ಸೇವಿಸಿ. ಸೌತೆಕಾಯಿ-ಪಾನಕ: ಸೌತೆಕಾಯಿ ಹೆಚ್ಚಿಕೊಂಡು ಅದಕ್ಕೆ ಕಲ್ಲುಸಕ್ಕರೆ ಬೆರೆಸಿ ಅರೆಯುವುದು. ಇದಕ್ಕೆ ನೀರು ಬೆರೆಸಿ ತದನಂತರ ಸ್ವಲ್ಪ ಲಿಂಬೆರಸ ಒಂದು ಚಮಚ ಇಸುಬುಕೋಲ್ ಬೆರೆಸಿದರೆ ಕುಡಿಯಲು ಸಿದ್ಧ. ಉಪಯೋಗಗಳು: ಉರಿಮೂತ್ರ ನಿವಾರಣೆಗೆ ಉಪಯುಕ್ತ. ಅಧಿಕ ರಕ್ತದೊತ್ತಡ ನಿವಾರಿಸಲು ಉತ್ತಮ. ಕಣ್ಣುರಿಯಿಂದ ಬಚಾವ್ ಆಗಬಹುದು. ದೇಹದ ಉಷ್ಣತೆಯನ್ನು ಕಡಿಮೆಗೊಳಿಸುತ್ತದೆ. ಹೆಸರು