ಪುದೀನಾ ಎಲೆ ಶೀತದ ಸಮಯದಲ್ಲಿ ಗಂಟಲು ನೋವು ಸಮಸ್ಯೆಗೆ ಉತ್ತಮ ಪರಿಹಾರವಾಗಿದೆ. ಮಳೆಗಾಲದಲ್ಲಿ ಪುದೀನಾದಿಂದ ತಯಾರಿಸಿದ ಚಹಾ ಮಾಡಿ ಸವಿಯುವ ಮೂಲಕ ರುಚಿಯ ಜತೆಗೆ ಆರೋಗ್ಯ ಪ್ರಯೋಜನಗಳನ್ನೂ ಸಹ ಪಡೆಯಬಹುದು. ಸಾಮಾನ್ಯವಾಗಿ ಮನೆಗಳಲ್ಲಿ ಪುದೀನ ಸಸ್ಯವನ್ನು ಬೆಳೆದಿರುತ್ತೀರಿ. ಪುದೀನಾದಿಂದ ತಯಾರಿಸುವ ಅಡುಗೆ ಪದಾರ್ಥಗಳು ಹೆಚ್ಚು ರುಚಿಕರವಾಗಿರುತ್ತದೆ. ಪುದೀನಾ ಚಟ್ನಿ, ಪುದೀನಾ ಸಾಂಬಾರ್ ಸೇರಿದಂತೆ ಪಕೋಡಾದಂತಹ ಸ್ನ್ಯಾಕ್ಸ್ಗಳನ್ನೂ ಸಹ ಮಾಡಿ ಸವಿಯುತ್ತೇವೆ. ಹೀಗಿರುವಾಗ ಪುದೀನಾ ಸೇವನೆಯಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ? ಪುದೀನಾ ಆರೋಗ್ಯಕ್ಕೆ