ಬೆಂಗಳೂರು: ಕೆಲಸ, ಟೆನ್ ಷನ್ ಇನ್ನೇನೋ ಕಾರಣ.. ಸರಿಯಾಗಿ ನಿದ್ರೆ ಮಾಡಲಾಗುತ್ತಿಲ್ಲವೇ? ಹಾಗಿದ್ದರೆ ಹುಷಾರಾಗಿರಿ. ನಿಮ್ಮ ಆರೋಗ್ಯವನ್ನು ನೀವೇ ಹಾಳು ಮಾಡಿಕೊಳ್ಳುತ್ತಿದ್ದೀರಿ. ನಿದ್ರೆ ಸರಿಯಾಗಿ ಮಾಡದೇ ಇದ್ದರೆ ನಿಮ್ಮ ದೇಹದಲ್ಲಿರುವ ರೋಗ ನಿರೋಧಕ ಶಕ್ತಿ ಕುಂಠಿತವಾಗುತ್ತದೆ ಎಂದು ಹೊಸ ಅಧ್ಯಯನ ತಿಳಿಸಿದೆ. ಕಷ್ಟಪಟ್ಟು ಕೆಲಸ ಮಾಡಬೇಕು ಎಂಬುದೇನೋ ನಿಜ. ಹಾಗಂತ ನಿದ್ರೆ ಮಾಡದೆ, ನಿಮ್ಮ ಆರೋಗ್ಯ ಹಾಳು ಮಾಡಿಕೊಳ್ಳಬೇಡಿ.ನಮ್ಮ ದೇಹಕ್ಕೆ ದಿನದಲ್ಲಿ ಏಳರಿಂದ ಎಂಟು ಗಂಟೆ ನಿದ್ರೆ ಅಗತ್ಯ.