ಶರೀರ ಎಂಬುದನ್ನು ಪ್ರಕೃತಿ ನಮಗೆ ನೀಡಿರುವ ಒಂದು ಅದ್ಭುತ ಯಂತ್ರಕ್ಕೆ ಹೋಲಿಸಬಹುದಾದರೆ ವ್ಯಾಯಾಮ ಎಂಬುದು ಅದನ್ನು ಸುಸ್ಥಿತಿಯಲ್ಲಿಡುವಂತೆ ನಿರ್ವಹಣೆ ಮಾಡುವ ವಿಧಾನ. ಆದುದರಿಂದ ವ್ಯಾಯಾಮ ಹವ್ಯಾಸವಲ್ಲ, ಬದಲಿಗೆ ದಿನಚರಿಯಾಗಬೇಕು. ಅದಕ್ಕೆ ದೇಹದೊಂದಿಗೇ ಮನಸ್ಸನ್ನು ಸಿದ್ಧಗೊಳಿಸುವುದು ಮುಖ್ಯ. ವ್ಯಾಯಾಮ ಕಡ್ಡಾಯವಾದರೂ ಯಾವ ರೀತಿಯ ವ್ಯಾಯಾಮ, ಸಮಯ ಎಂಬುದು ಅವರವರ ಆಯ್ಕೆ. ಕೆಲವರಿಗೆ ಬೆಳಿಗ್ಗೆ ಬೇಗ ಎದ್ದು ಓಡುವುದು ಸುಲಭವಾದರೆ ಮತ್ತೆ ಹಲವರಿಗೆ ಸಂಜೆ ಗೆಳೆಯರೊಡನೆ ಆಟ ಆಡುವುದು ಇಷ್ಟ. ಅನೇಕರಿಗೆ ಮಧ್ಯಾಹ್ನದ