ನಿಮಿರು ದೌರ್ಬಲ್ಯ ಈ ಗಂಭೀರ ಸಮಸ್ಯೆಯ ಲಕ್ಷಣವಾಗಿರಬಹುದು!

ಬೆಂಗಳೂರು| Krishnaveni K| Last Modified ಮಂಗಳವಾರ, 13 ಆಗಸ್ಟ್ 2019 (09:28 IST)
ಬೆಂಗಳೂರು: ನಿಮಿರು ದೌರ್ಬಲ್ಯ ಹೆಚ್ಚಿನ ಪುರುಷರು ಇಂದಿನ ದಿನಗಳಲ್ಲಿ ಅನುಭವಿಸುವ ಸಮಸ್ಯೆಯೇ. ಆದರೆ ಹಾಗಂತ ಅದನ್ನು ಉಪೇಕ್ಷಿಸಬೇಡಿ.

 
ನಿಮಿರು ದೌರ್ಬಲ್ಯ ಎನ್ನುವುದು ಹೃದ್ರೋಗದ ಲಕ್ಷಣವೂ ಆಗಿರಬಹುದು ಎನ್ನುತ್ತಾರೆ ತಜ್ಞರು. ಹೃದಯಕ್ಕೆ ಸಂಬಂಧಿಸಿದ ರಕ್ತನಾಳದ ಜತೆಗೆ ಜನನಾಂಗದ ರಕ್ತನಾಳಕ್ಕೂ ಸಂಬಂಧವಿರುತ್ತದೆ. ಹೀಗಾಗಿ ನಿಮಿರು ದೌರ್ಬಲ್ಯ ಹೃದಯಕ್ಕೆ ಸಂಬಂಧಿಸಿದ ಖಾಯಿಲೆಗಳ ಆರಂಭದ ಲಕ್ಷಣವೂ ಆಗಿರಬಹುದು ಎಂದು ತಜ್ಞರು ಎಚ್ಚರಿಸುತ್ತಾರೆ.
 
ಹೀಗಾಗಿ ನಿಮಿರು ದೌರ್ಬಲ್ಯ ಎಂದಾಕ್ಷಣ ಜಾಹೀರಾತು ನೋಡಿ ಸಿಕ್ಕ ಸಿಕ್ಕ ಔಷಧ ತೆಗೆದುಕೊಳ್ಳುವುದನ್ನು ಬಿಟ್ಟು ತಜ್ಞ ವೈದ್ಯರಿಂದ ಪರೀಕ್ಷಿಸಿಕೊಳ್ಳುವುದು ಉತ್ತಮ.
ಇದರಲ್ಲಿ ಇನ್ನಷ್ಟು ಓದಿ :