ಬೀಟ್ರೂಟ್ ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಹೀಗಾಗಿ ಬೀಟ್ರೂಟ್ ತಿನ್ನಲು ಇಷ್ಟಪಡದವರು ಅದನ್ನು ಜ್ಯೂಸ್ ರೂಪದಲ್ಲಿ ಬೆಳಿಗ್ಗೆ ಕುಡಿಯುವ ಅಭ್ಯಾಸ ಮಾಡಿಕೊಳ್ಳಿ. ಇದರಿಂದ ಅನೇಕ ಪ್ರಯೋಜನಗಳಿವೆ. ಇತ್ತೀಚಿನ ದಿನಗಳಲ್ಲಿ ಅನಾರೋಗ್ಯಕ್ಕೆ ಒಳಗಾಗುವವರ ಸಂಖ್ಯೆ ಹೆಚ್ಚುತ್ತಿದೆ. ನಾವು ತಿನ್ನುವ ಆಹಾರ, ಒತ್ತಡ, ಮಾನಸಿಕ ಖಿನ್ನತೆ ಇತ್ಯಾದಿಗಳಿಂದಾಗಿ, ಮನುಷ್ಯ ಅನಾರೋಗ್ಯದಿಂದ ಬಳಲುತ್ತಿದ್ದಾನೆ. ಹೀಗಾಗಿ ಕೆಲವು ಆರೋಗ್ಯಕರ ನಿಯಮಗಳನ್ನು ಪಾಲಿಸಿದರೆ, ಸದಾ ನಾವು ಆರೋಗ್ಯವಂತರಾಗಿರಬಹುದು ಎಂದು ತಜ್ಞರು ಹೇಳಿದ್ದಾರೆ. ಅದರಲ್ಲೂ ಪ್ರತಿದಿನ ವಿವಿಧ ರೀತಿಯ