ಬೆಂಗಳೂರು: ವಯಸ್ಸಾದಂತೆ, ಒತ್ತಡದ ಪರಿಣಾಮದಿಂದ ಅಥವಾ ಜೀವನಶೈಲಿಯಿಂದಾಗಿ ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗುತ್ತಾ ಬರುತ್ತದೆ. ಆರೋಗ್ಯಕರ ಲೈಂಗಿಕ ಜೀವನಕ್ಕಾಗಿ ವೀರ್ಯಾಣುಗಳ ಸಂಖ್ಯೆ ಹೆಚ್ಚಬೇಕೆಂದರೆ ಯಾವ ಆಹಾರ ಸೇವಿಸಬೇಕು? ಹಣ್ಣು ಹಂಪಲು ಹೇರಳವಾಗಿ ಹಣ್ಣು ಸೇವಿಸುತ್ತಿರಿ. ಅದರಲ್ಲೂ ಬೀಟಾ ಕ್ಯಾರೊಟಿನ್ ಅಂಶ ಹೆಚ್ಚಿರುವ ಹಳದಿ ಮತ್ತು ಕಿತ್ತಳೆ ಬಣ್ಣದ ಹಣ್ಣುಗಳನ್ನು ಹೆಚ್ಚು ಸೇವಿಸಿ.ಕೊಬ್ಬು ನಿಯಂತ್ರಣದಲ್ಲಿರಿಸಿ ಅಧಿಕ ಕೊಬ್ಬಿನ ಸಮಸ್ಯೆಯಿಂದ ಬಳಲುತ್ತಿರುವ ದಂಪತಿಗಳಿಗೆ ಸಂತಾನ ಫಲ ನಿಧಾನವಾಗುತ್ತದೆ ಎನ್ನುವುದು ಹಲವು ಅಧ್ಯಯನಗಳಿಂದ ತಿಳಿದುಬಂದಿದೆ.