ಬೆಂಗಳೂರು: ಸಣ್ಣ ವಯಸ್ಸಿನಲ್ಲಿ ಮದುವೆಯಾದರೆ ಅಥವಾ ಲೈಂಗಿಕವಾಗಿ ಹೆಚ್ಚು ಜ್ಞಾನವಿಲ್ಲದೇ ಇದ್ದಾಗ ಮದುವೆಯಾದರೆ ದಾಂಪತ್ಯ ಜೀವನದಲ್ಲಿ ಹೊಂದಾಣಿಕೆ ಕೊರತೆ ಕಾಡುವುದು ಸಹಜ.ಲೈಂಗಿಕ ಜೀವನದ ಬಗ್ಗೆ ತಿಳುವಳಿಕೆ ಇಲ್ಲದೇ ಇದ್ದ ಸಮಯದಲ್ಲಿ ಗಂಡನೊಡನೆ ದೈಹಿಕ ಸಂಬಂಧಕ್ಕೆ ಮನಸ್ಸು ಒಪ್ಪುವುದಿಲ್ಲ. ಈ ಸಂದರ್ಭದಲ್ಲಿ ಗಂಡನ ಲೈಂಗಿಕ ಬಯಕೆಗಳು ಪೂರ್ತಿಯಾಗದೇ ಇಬ್ಬರ ನಡುವೆ ಮುನಿಸು, ವೈಮನಸ್ಯ ಸಾಮಾನ್ಯ. ಹೀಗಾಗಿ ಚಿಕ್ಕ ವಯಸ್ಸಿನಲ್ಲಿ ಮದುವೆಯಾಗುವಾಗ ಹೆಣ್ಣು ಮಕ್ಕಳಿಗೆ ಲೈಂಗಿಕ ಜೀವನದ ಬಗ್ಗೆ ತಿಳುವಳಿಕೆ ನೀಡಬೇಕಾದುದು ಅಗತ್ಯ.