ಬೆಂಗಳೂರು : ಮೊಟ್ಟೆ ಆರೋಗ್ಯಕ್ಕೆ ಉತ್ತಮ ಎಂಬುದು ಎಲ್ಲರಿಗೂ ತಿಳಿದೆ ಇದೆ. ಆದರೆ ಒಂದಕ್ಕಿಂತ ಹೆಚ್ಚು ಮೊಟ್ಟೆ ತಿಂದರೆ ಅಜೀರ್ಣ ಸಮಸ್ಯೆ ಉಂಟಾಗುತ್ತದೆ ಎಂಬ ಭಯ ಹಲವರಲ್ಲಿರುತ್ತದೆ. ಆದರೆ ಇನ್ನು ಮುಂದೆ ಈ ರೀತಿ ಭಯ ಪಡುವ ಅಗತ್ಯವಿಲ್ಲ. ಯಾಕೆಂದರೆ ಇತ್ತೀಚಿನ ಅಧ್ಯಯನವೊಂದು ದಿನಕ್ಕೆರಡು ಮೊಟ್ಟೆಗಳನ್ನು ಸೇವಿಸುವ ಮೂಲಕ ಕೆಲವು ಪ್ರಯೋಜನಗಳಿವೆ ಎಂದು ತಿಳಿಸಿದೆ.