ವರ್ಷಕ್ಕೊಮ್ಮೆ ಬರುವ ಯುಗಾದಿಯಂದು ಕಹಿಬೇವನ್ನು ತಿನ್ನುವುದಕ್ಕೆ ನಮ್ಮಲ್ಲಿ ಕೆಲವರು ಮೂಗು ಮುರಿಯುವುದುಂಟು. ಕಹಿಬೇವು ಹೆಸರೇ ಸೂಚಿಸುವಂತೆ ರುಚಿಯು ಕಹಿಯಾಗಿರುತ್ತದೆ. ಅದಕ್ಕೆ ನಮ್ಮ ಹಿರಿಯರು ''ಅದರಕ್ಕೆ ಕಹಿಯಾದದ್ದು ಉದರಕ್ಕೆ ಸಿಹಿ'' ಎಂದಿದ್ದಾರೆ. ಇದನ್ನು ಕಹಿಬೇವನ್ನು ನೋಡಿಯೇ ಹೇಳಿರಬೇಕು. ಕಹಿಬೇವಿನ ಎಲೆಯನ್ನು ದಿನಕ್ಕೆ ಒಂದು ಎಲೆಯನ್ನು ಜಗಿದರೂ ನಾವು ಉತ್ತಮ ಆರೋಗ್ಯವನ್ನು ಹೊಂದಬಹುದು. ವೈದ್ಯಕೀಯ ಚಿಕಿತ್ಸೆಗಳಲ್ಲಿಯೂ ಈ ಬೇವು ಬಹಳಷ್ಟು ಉಪಯೋಗವಾಗುತ್ತದೆ.