ಖಿನ್ನತೆಗೆ ಚಿಕಿತ್ಸೆ ನೀಡಲು ಬಳಸಲಾಗುತ್ತಿರುವ ಫ್ಲಿಬನ್ಸೆರಿನ್ ಮಹಿಳೆಯರಲ್ಲಿ ಲೈಂಗಿಕ ಆಸಕ್ತಿಯನ್ನು ಕೆರಳಿಸುವಲ್ಲಿ ಸಹಾಯಕ ಎಂಬುದಾಗಿ ಪ್ರತ್ಯೇಕ ಮೂರು ಅಧ್ಯಯನಗಳು ತಿಳಿಸಿವೆ. ಹಾಗಾಗಿ ಇದು ಮಹಿಳಾ ವಯಾಗ್ರದಂತೆ ಕಾರ್ಯಾಚರಿಸುತ್ತದೆ ಎಂಬುದಾಗಿ ತಜ್ಞರು ಹೇಳಿದ್ದಾರೆ. ಇದು ಮೊತ್ತ ಮೊದಲಬಾರಿಗೆ ನಡೆಸಿರುವ ಪರೀಕ್ಷೆಯಾಗಿದೆ. ಈ ಚಿಕಿತ್ಸೆಯು ಕಡಿಮೆ ಲೈಂಗಿಕ ಆಸಕ್ತಿ ಹೊಂದಿರುವ ಮಹಿಳೆಯರಲ್ಲಿ ಮೆದುಳಿನ ಸಮಕ್ಕೆ ಲೈಂಗಿಕ ಪ್ರಚೋದನೆ ಮಾಡುತ್ತದೆ ಎಂಬುದಾಗಿ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದ ಸ್ತ್ರೀರೋಗ ಹಾಗೂ ಪ್ರಸೂತಿ ತಜ್ಞ ಜಾನ್ ಎಂ.